ಭೂದಾಖಲೆ

ಭೂದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಸಂರಕ್ಷಿಸುವುದು : ಹಳೆಯ ಭೂದಾಖಲೆಗಳನ್ನು ಸಂರಕ್ಷಿಸುವ ಸಲುವಾಗಿ ಪ್ರಥಮವಾಗಿ ರಾಜ್ಯದ 18 ತಾಲ್ಲೂಕುಗಳಲ್ಲಿ ಸ್ಕ್ಯಾನಿಂಗ್ ಮುಖಾಂತರ ಭೂದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂರಕ್ಞಿಸಲಾಗಿದೆ. 8 ತಾಲ್ಲೂಕುಗಳ ಕೆಲಸ ಜಾರಿಯಲ್ಲಿದೆ. ಉಳಿದ ತಾಲ್ಲೂಕುಗಳ ಸ್ಕ್ಯಾನಿಂಗ್ ಕಾರ್ಯವನ್ನು ಮುಂದಿನ ವರ್ಷಗಳಲ್ಲಿ ಹಂತ ಹಂತವಾಗಿ ಹಮ್ಮಿಕೊಳ್ಳಲಾಗುವುದು. · ನಕಾಶೆಗಳ ತಯಾರಿಕೆ ಹಾಗೂ ಮುದ್ರಣ : ಜಮೀನಿನ ಸರ್ವೆ ನಂಬರ್ ಹಾಗೂ ಭೌಗೋಳಿಕ ಸ್ಥಿತಿ ತಿಳಿಯಲು ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಮತ್ತು ಇತರೆ ಇಲಾಖೆಗಳಿಗೆ ಹಾಗೂ ಭೂಮಾಪನ ಇಲಾಖೆಗೂ ನಕಾಶೆಗಳ ಅವಶ್ಯಕವಿರುತ್ತದೆ. ಆದುದರಿಂದ ಪ್ರತಿಯೊಂದು ಗ್ರಾಮದ, ತಾಲ್ಲೂಕಿನ, ಜಿಲ್ಲೆಯ ಮತ್ತು ರಾಜ್ಯದ ನಕಾಶೆಗಳು ಈ ಮೇಲೆ ನಮೂದಿಸಿದ ಎಲ್ಲರಿಂದಲೂ ಬಹಳ ಬೇಡಿಕೆ ಇರುವುದರಿಂದ ಆಯಾ ತಾಲ್ಲೂಕು ತಹಶೀಲ್ದಾರ್ ರವರಿಂದ ಕಚ್ಚಾ ನಕಾಶೆಗಳನ್ನು ಕೇಂದ್ರ ಕಛೇರಿಗೆ ಮುದ್ರಣಕ್ಕಾಗಿ ತರಿಸಿಕೊಳ್ಳಲಾಗುತ್ತದೆ. ನಂತರ ನಕಾಶೆ ವಿಭಾಗದಲ್ಲಿ ಮುದ್ರಣಕ್ಕಾಗಿ ಸಿದ್ಧಪಡಿಸಲಾಗುವುದು. ಇಲಾಖೆಯ ಅಧೀನದಲ್ಲಿ ಒಟ್ಟು 3 ಮುದ್ರಣಾಲಯಗಳು ಇರುತ್ತವೆ – 1. ಬೆಂಗಳೂರು, 2. ಮೈಸೂರು ಮತ್ತು 3. ಧಾರವಾಡ. ಕೇಂದ್ರ ಕಛೇರಿಯಲ್ಲಿ ಬೆಂಗಳೂರು ಮತ್ತು ಗುಲ್ಬರ್ಗಾ ವಿಭಾಗದ ನಕಾಶೆಗಳನ್ನು ಮುದ್ರಣ ಮಾಡಲಾಗುತ್ತದೆ. ಮೈಸೂರಿನಲ್ಲಿ ಮೈಸೂರು ವಿಭಾಗದ ನಕ್ಷೆಗಳನ್ನು ಮುದ್ರಣ ಮಾಡಲಾಗುತ್ತದೆ ಮತ್ತು ಧಾರವಾಡದಲ್ಲಿ ಬೆಳಗಾಂ ವಿಭಾಗದ ನಕಾಶೆಗಳನ್ನು ಮುದ್ರಣ ಮಾಡಲಾಗುತ್ತದೆ. ಇದಲ್ಲದೆ ಕೇಂದ್ರ ಕಛೇರಿಯಲ್ಲಿರುವ ಮುದ್ರಣಾಲಯದಿಂದ ಇಲಾಖೆಗೆ ಬೇಕಾಗುವ ತಾಂತ್ರಿಕ ನಮೂನೆಗಳನ್ನೂ ಸಹ ಮುದ್ರಣ ಮಾಡಲಾಗುತ್ತದೆ.

2. ಪ್ರಸ್ತುತ ಕುಂದುಕೊರತೆಗಳಿಗೆ ನಿವಾರಣೋಪಾಯಗಳು : ಆಯುಕ್ತರ ಅಧೀನದ ಕಛೇರಿಗಳಲ್ಲಿ ಸಾರ್ವಜನಿಕ ಸಂಪರ್ಕ ಘಟಕಗಳನ್ನು ತೆರೆಯಲಾಗಿದ್ದು ಈ ಘಟಕದಲ್ಲಿ ಏಕಗವಾಕ್ಷಿ ಪದ್ದತಿಯಂತೆ ಕೆಲಸ ನಿರ್ವಹಣೆ ಮಾಡಲಾಗುತ್ತಿದೆ. ಭೂದಾಖಲೆಗಳ ನಕಲುಗಳನ್ನು ನಿಗಧಿತ ಅವಧಿಯಲ್ಲಿ ವಿತರಣೆ ಮಾಡಲಾಗುತ್ತಿದೆ. ಸಾಧ್ಯವಾದ ಮಟ್ಟಿಗೆ ಅಂದೇ ವಿತರಣೆ ಮಾಡಲಾಗುತ್ತಿದೆ. ಈ ಕುರಿತು ಸೂಚನಾ ಫಲಕಗಳನ್ನು ಪ್ರದರ್ಶಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಉಂಟು ಮಾಡಿ ಇಲಾಖೆಯ ಸಿಬ್ಬಂದಿಗಳಿಗೆ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುವಂತೆ ಮಾರ್ಗದರ್ಶನ ನೀಡಲಾಗಿದೆ.