Citizen Charter

ನಾಗರೀಕ ಸನ್ನದ್ದು


ಪೀಠಿಕೆ

            ರಾಜ್ಯದಲ್ಲಿ ವ್ಯವಸಾಯವು ಜನರ ಮುಖ್ಯ ಕಸುಬಾಗಿದ್ದು, ಲಕ್ಷಾಂತರ ರೈತರಿಗೆ ಭೂಮಿಯು ಜೀವನಾಧಾರವಾದುದಾಗಿ ಪ್ರಾಮುಖ್ಯತೆ ಹೊಂದಿರುತ್ತದೆ.  ವ್ಯವಸಾಯ ಉದ್ದೇಶಕ್ಕಾಗಿ ಅಥವಾ ವಸತಿ ಸೌಕರ್ಯಕ್ಕಾಗಲೀ ಜಮೀನನ್ನು ಹೊಂದುವ ಆಸಕ್ತಿ ರೈತಾಪಿ ಜನರಲ್ಲಿ ಅಪರಿಮಿತವಾಗಿದೆ.  ಕರ್ನಾಟಕ ರಾಜ್ಯವು ತನ್ನ ರಾಜ್ಯದ ಪುರಾತನ ಇಲಾಖೆಯಾದ ಭೂಮಾಪನ ಇಲಾಖೆಯಲ್ಲಿ ಮಹತ್ವದ ದಾಖಲಾತಿಗಳನ್ನು ಸಂರಕ್ಷಿಸಿಡುವುದು ಹಾಗೂ ರಾಜ್ಯದ ಜಮೀನುಗಳ ಗಡಿಗಳನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ.  ಭೂಮಾಪನ ಇಲಾಖೆಯು ಸಾರ್ವಜನಿಕರಿಗೆ ಮಹತ್ತರವಾದ ಸೇವೆ ಸಲ್ಲಿಸುತ್ತಿದೆ ಹಾಗೂ ಇತರೆ ಇಲಾಖೆ, ಮಂಡಳಿ, ನಿಗಮಗಳೊಂದಿಗೆ ಸಹ ಸಹಕಾರವನ್ನು ನೀಡುತ್ತಿದ್ದು ಅಮೂಲ್ಯವಾದ ಭೂ ಮಾಹಿತಿಯನ್ನು ಒದಗಿಸುತ್ತಿದೆ.  ಇಲಾಖೆಯ ಈ ಕಾರ್ಯವು ಜನ ಸಾಮ್ಯಾನರ ಸೇವೆಗೆ ಬದ್ದವಾಗಿರುವ ಅಂಶವನ್ನು ತೋರಿಸುತ್ತದೆ.  ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂದುಕೊರತೆ ಮತ್ತು ದೂರು ನಿವಾರಣೆ ಬಗ್ಗೆ ಲಭ್ಯವಿರುವ ಆಡಳಿತ ವ್ಯವಸ್ಥೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಈ ಕೆಳಕಂಡಂತೆ ವಿವರಿಸಲಾಗಿದೆ.

 

1.  ಸಾಮಾನ್ಯ ಮಾಹಿತಿ :

 

1.1                              ಸ್ಥಳೀಯ ಮಟ್ಟದ ಭೂಮಾಪನ ಕಛೇರಿಯು ತಹಶೀಲ್ದಾರ್ ರವರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತದೆ.

1.2                              ಕೆಲಸದ ವೇಳೆ : ಬೆಳಿಗ್ಗೆ                     – 10.00 ಗಂಟೆಯಿಂದ 1.30 ರವರೆಗೆ

    ಮಧ್ಯಾಹ್ನ                    – 2.15 ಗಂಟೆಯಿಂದ 5.30 ರವರೆಗೆ

    ಊಟದ ಸಮಯ             – 1.30 ರಿಂದ 2.15 ರವರೆಗೆ

            ಭಾನುವಾರ ಮತ್ತು ಸಾರ್ವತ್ರಿಕ ರಜಾದಿನಗಳಂದು ಕಛೇರಿಯು ಮುಚ್ಚಲ್ಪಟ್ಟಿರುತ್ತದೆ.

 

ಟಿಪ್ಪಣಿ : ಭೂಮಾಪನ ಕಾರ್ಯಕ್ಕೆ ಸಂಬಂಧಿಸಿದಂತೆ ಭೂಮಾಪಕ ಮೂಲ ನೌಕರನಾಗಿರುತ್ತಾನೆ. ಸದರಿ ಭೂಮಾಪಕರ ಭೂಮಾಪನ ಕಛೇರಿಯ ತಿಳುವಳಿಕೆ ಬೋರ್ಡಿನಲ್ಲಿ ಪ್ರಕಟಿಸಿದಂತೆ ಕಛೇರಿ ಹಾಗೂ ಕ್ಷೇತ್ರಗಳಲ್ಲಿ ತನ್ನ ಪ್ರವಾಸ ಕಾರ್ಯಕ್ರಮದಂತೆ ಕಾರ್ಯ ನಿರ್ವಹಿಸುತ್ತಾನೆ.  ನಗರ ಭೂಮಾಪಕರು ಬೆಳಗಿನ ವೇಳೆಯಲ್ಲಿ ಕ್ಷೇತ್ರದಲ್ಲೂ ಮಧ್ಯಾಹ್ನದ ನಂತರ ಕಛೇರಿಗಳಲ್ಲೂ ಕೆಲಸ ನಿರ್ವಹಿಸುತ್ತಾರೆ.

2.  ಲಭ್ಯವಿರುವ ಸೇವೆಗಳು  :

2.1              ಕರ್ನಾಟಕ ಭೂಕಂದಾಯ ಅಧಿನಿಯಮ 1964 ಮತ್ತು 1966ರ ನಿಯಮಗಳ ಪ್ರಕಾರ ಸರ್ವೆ ನಂಬರುಗಳನ್ನು ಗುರುತಿಸುವ ಮತ್ತು ಹಿಸ್ಸಾ ಗಡಿಗಳನ್ನು ನಿಗಧಿಪಡಿಸುವುದು (ಹದ್ದುಬಸ್ತು ನಿಗಧಿಪಡಿಸುವುದು).

2.2              ಮ್ಯುಟೇಷನ್, ಭೂಮಂಜೂರಾತಿ, ಭೂಸ್ವಾಧೀನ, ಭೂಪರಿವರ್ತನೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಭೂಮಿಯನ್ನು ವಿಭಾಗಗಳನ್ನಾಗಿ ಮಾಡುವುದು.  ಈ ಕಾರ್ಯವನ್ನು ಕಂದಾಯ ಇಲಾಖೆಯಿಂದ ಬಂದ ಕಡತಗಳನ್ನಾಧರಿಸಿ ನಿರ್ವಹಿಸಲಾಗುವುದು.

2.3              ಭೂದಾಖಲಾತಿಗಳಿಗೆ ಸಂಬಂಧಿಸಿದಂತೆ ದೃಢೀಕೃತ ಪ್ರತಿಗಳನ್ನು ನೀಡುವುದು.

2.4              ತಾಲ್ಲೂಕು ಭೂಮಾಪನ ಕಛೇರಿಗಳಲ್ಲಿ ಗ್ರಾಮ ನಕಾಶೆಗಳನ್ನು ಮಾರಾಟ ಮಾಡುವುದು. 

2.5              ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ತಾಲ್ಲೂಕು / ಜಿಲ್ಲಾ / ರಾಜ್ಯ ನಕಾಶೆಗಳನ್ನು ಮಾರಾಟ ಮಾಡುವುದು.

2.6              ಕರ್ನಾಟಕ ಭೂಕಂದಾಯ ಅಧಿನಿಯಮ 1964 ಅಧ್ಯಾಯ XIII ಮತ್ತು 1966ರ ನಿಯಮಗಳು ಅಧ್ಯಾಯ XII ರ ಪ್ರಕಾರ ನಗರಮಾಪನ ಕಾರ್ಯವನ್ನು ಜಾರಿಗೊಳಿಸಿರುವ ಸ್ಥಳಗಳಲ್ಲಿ ಮ್ಯುಟೇಷನ್ ಗಳನ್ನು ಆಸ್ತಿ ಕಾರ್ಡ್ ಮತ್ತು ವಹಿಗಳಲ್ಲಿ ದಾಖಲಿಸುವುದು.

2.7              ನಗರಮಾಪನ ಕಾರ್ಯವನ್ನು ಜಾರಿಗೊಳಿಸಿರುವ ಕಡೆಗಳಲ್ಲಿ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಒಪ್ಪಿಕೊಂಡು ಗಡಿಗಳನ್ನು ನಿರ್ಧರಿಸುವುದು.

 

3.  ನಮ್ಮ ಬದ್ಧತೆ  :

·        ಇಲಾಖೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಸೇವೆಯು ಉತ್ತಮ ಗುಣಮಟ್ಟಗಳಿಂದ ಕೂಡಿದ್ದಾಗಿರುತ್ತದೆ.

·        ಉದಾರತೆ ಮತ್ತು ಕಾಲಮಿತಿಯ ಸಹಾಯಕ್ಕೆ ಬದ್ದವಾಗಿರುತ್ತದೆ.

·        ಲಕ್ಷ್ಯ ಮತ್ತು ಪಾರದರ್ಶಕತೆಗೆ ಬದ್ದವಾಗಿರುತ್ತದೆ.

·        ದಕ್ಷತೆ ಮತ್ತು ಸಕಾಲ ಸ್ಪಂದನೆಯೊಂದಿಗೆ ಕಾರ್ಯ ನಿರ್ವಹಿಸಲು ಬದ್ದರಾಗಿರುತ್ತಾರೆ.

 

 

4.  ಕುಂದುಕೊರತೆಗಳ ನಿವಾರಣೆ  :

4.1              ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದೇ ಇರುವವರ ಮೇಲೆ ಸೂಕ್ತ ಕ್ರಮಗಳನ್ನು ಜರುಗಿಸಲಾಗುವುದು.  ಅರ್ಜಿದಾರರಿಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಪೂರೈಸಲಾಗುವುದು.

4.2              ಕರ್ತವ್ಯದಲ್ಲಿ ನಿರಂತರವಾಗಿ ಕೊರತೆ ಕಂಡು ಬಂದಲ್ಲಿ, ಅಂತಹ ಕೊರತೆಗಳಿಗೆ ಕಾರಣಗಳನ್ನು ಕಂಡು ಹಿಡಿದು ಪರಿಹಾರಗಳನ್ನು ಸಹ ಸಾರ್ವಜನಿಕರ ಗಮನಕ್ಕೆ ಸಂಬಂಧಿಸಿದ ಕಛೇರಿಗಳಲ್ಲಿ ಪ್ರಕಟಿಸಲಾಗುವುದು.

4.3              ಕಛೇರಿಯ ಮುಖ್ಯಸ್ಥರು ಪ್ರತಿ ತಿಂಗಳು ಪುನರಾವಲೋಕನ ಮಾಡುವರು.  ಕುಂದು /ದೂರುಗಳನ್ನು ಪರಿಶೀಲಿಸುವುದು ಹಾಗೂ ಸೂಕ್ತ ಪರಿಹಾರಗಳನ್ನು ಮೇಲಾಧಿಕಾರಿಗಳಿಂದ ಪಡೆಯಲಾಗುವುದು.

4.4              ಸಾರ್ವಜನಿಕರ ಕುಂದು ಕೊರತೆಗೆ ಸಂಬಂಧಿಸಿದಂತೆ ಅವರುಗಳ ಗಮನಕ್ಕಾಗಿ ಕೆಲವು ಮಾಹಿತಿಗಳನ್ನು ಎಲ್ಲ ಕಛೇರಿಗಳಲ್ಲಿ ತಿಳುವಳಿಕೆ ಫಲಕದಲ್ಲಿ ಪ್ರಕಟಿಸಲಾಗಿದೆ.  ಅದನ್ನು ಈ ಕೆಳಗೆ ಪುನರುಚ್ಚರಿಸಲಾಗಿದೆ.

v           ಸಾರ್ವಜನಿಕರು ತಮ್ಮ ಕುಂದುಕೊರತೆಗಳ ನಿವಾರಣೆಗೆ ಸಂಬಂಧಿಸಿದಂತೆ ಸಂಪರ್ಕಾಧಿಕಾರಿಗಳನ್ನು ಭೇಟಿ ಮಾಡತಕ್ಕದ್ದು.

v           ಸಾರ್ವಜನಿಕರು ತಮ್ಮ ಅರ್ಜಿ- ಅಹವಾಲುಗಳನ್ನು ಸಾರ್ವಜನಿಕರ ಕುಂದು ಕೊರತೆ ಘಟಕದಲ್ಲಿ ನೀಡತಕ್ಕದ್ದು ಹಾಗೂ ಸ್ವೀಕೃತಿ ಪಡೆಯುವುದು.

v           ಅರ್ಜಿದಾರರಿಗೆ ಕ್ರಮ ಜರುಗಿಸಿದ ಬಗ್ಗೆ ಮಾಹಿತಿಯನ್ನು ಅಂಚೆ ಮೂಲಕ ತಿಳಿಸಲಾಗುವುದು.

v           ಅನಧೀಕೃತ ಏಜೆಂಟ್ ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು.

v           ಅವಶ್ಯವಿರುವ ದೃಢೀಕೃತ ದಾಖಲಾತಿಗಳನ್ನು,  ಅರ್ಜಿಯನ್ನು ಸಲ್ಲಿಸಿ ಸಾರ್ವಜನಿಕ ಸಂಪರ್ಕ ಘಟಕಗಳಲ್ಲಿಯೇ ಪಡೆಯತಕ್ಕದ್ದು.

v           ಸೇವೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪಡಿಸಿದ ದಾಖಲಾತಿಗಳ ಪೂರೈಕೆಗೆ ಪಾವತಿಸಬೇಕಾದ ಶುಲ್ಕಗಳನ್ನು ಸಹ ತಿಳುವಳಿಕೆ ಫಲಕದಲ್ಲಿ ನಮೂದಿಸಲಾಗಿದೆ.

4.5              ಸಾರ್ವಜನಿಕರೊಂದಿಗೆ ಸೌಹಾರ್ದತೆಗಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಹೆಸರಿಸಲಾಗಿದೆ.  ಕಾರ್ಯನಿರ್ವಾಹಕ ಅಧೀಕ್ಷಕರು / ಹಿರಿಯ ತಪಾಸಕರು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ.  ಇವರು ಸಾರ್ವಜನಿಕರಿಗೆ ಕಾಣುವಂತಹ ಮತ್ತು ಅನುಕೂಲವಾಗುವಂತಹ ಸ್ಥಳದಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಾರೆ.  ಸಾರ್ವಜನಿಕ ಸಂಪರ್ಕಾಧಿಕಾರಿ ಎಂಬ ಫಲಕವನ್ನು ಸಹ ತಮ್ಮ ಮೇಜಿನ ಮೇಲೆ ಇಟ್ಟಿರುತ್ತಾರೆ.  ಸಂಪರ್ಕಾಧಿಕಾರಿಯನ್ನು ಸಂಪರ್ಕಿಸುವ ಸೂಚನಾ ಪತ್ರವನ್ನು ಸಹ ಪ್ರಕಟಿಸಲಾಗಿರುತ್ತದೆ.  ಸಾರ್ವಜನಿಕ ಸಂಪರ್ಕಾಧಿಕಾರಿಯ ಕರ್ತವ್ಯಗಳೇನೆಂದರೆ :

 

v           ಸಾರ್ವಜನಿಕರಿಂದ ಅರ್ಜಿ / ದೂರುಗಳನ್ನು ಸ್ವೀಕರಿಸುವುದು ಅವುಗಳನ್ನು ವಿಶೇಷವಾಗಿ ನಿಗಧಿಪಡಿಸಿದ ವಹಿಗಳಲ್ಲಿ ದಾಖಲಿಸಿ ನಿರ್ವಹಿಸುವುದು.

v           ಸಾರ್ವಜನಿಕ ಸಮಸ್ಯೆ ಕುಂದುಕೊರತೆಗಳ  ನಿವಾರಣೆಗೆ ಕ್ರಮಗಳನ್ನು ಜರುಗಿಸುವುದು.  ಅವರುಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವುದು.

v           ದೂರುಗಳನ್ನು ದಾಖಲಿಸಿಕೊಳ್ಳುವುದು ಹಾಗೂ ಸಾಧ್ಯವಾದಲ್ಲಿ ಆ ದಿನವೇ ಸೂಕ್ತ ಪರಿಹಾರವನ್ನು ಒದಗಿಸುವುದು.

v           ಅದೇ ದಿನವೇ ಪರಿಹಾರವನ್ನು ಒದಗಿಸಲು ಸಾಧ್ಯವಾಗದಿದ್ದಲ್ಲಿ ಸೂಕ್ತ ದಿನಾಂಕವನ್ನು ನಿಗಧಿಪಡಿಸಿ ಆ ದಿನದಂದು ಪರಿಹಾರ ದೊರಕುವ ಕ್ರಮಗಳನ್ನು ಜರುಗಿಸತಕ್ಕದ್ದು.

v           ಸಾರ್ವಜನಿಕರ ದೂರು / ಕೊರತೆಗಳನ್ನು ಆಯಾ ಕಛೇರಿಯ ಮುಖ್ಯಸ್ಥರ ಗಮನಕ್ಕೆ ತಂದು ಸೂಕ್ತ ಪರಿಹಾರ ಕೈಗೊಳ್ಳುವಂತೆ ಮಾಡುವುದು ಸಾರ್ವಜನಿಕ ಸಂಪರ್ಕಾಧಿಕಾರಿಯ ಕರ್ತವ್ಯವಾಗಿರುತ್ತದೆ.  ಯಾವುದೇ ರೀತಿ ವಿಳಂಬವಾಗುವುದನ್ನು ತಪ್ಪಿಸುವುದು ಇವರ ಜವಾಬ್ದಾರಿಯಾಗಿರುತ್ತದೆ.

v           ಪ್ರತಿ ವಾರ / ಮಾಸದ ಕೊನೆಯಲ್ಲಿ ದೂರುಗಳ / ಅರ್ಜಿಗಳ ಘೋಷ್ವಾರೆಯನ್ನು ತೆಗೆದು ಕಛೇರಿಯ ಮುಖ್ಯಸ್ಥರ ಗಮನಕ್ಕೆ ತಂದು ಅದನ್ನು ಇಲಾಖಾ ಮುಖ್ಯಸ್ಥರ ಗಮನಕ್ಕೆ ತರತಕ್ಕದ್ದು.

 

 

5.  ನಾಗರೀಕರಿಂದ ನಮ್ಮ ನಿರೀಕ್ಷೆ  :

 

ü      ಇಲಾಖಾ ಅಧಿಕಾರಿ / ನೌಕರರುಗಳನ್ನು ನೇರವಾಗಿ ಸಂಪರ್ಕಿಸುವುದು.  ಅನಧಿಕೃತ ಏಜಂಟ್ / ಮಧ್ಯವರ್ತಿಗಳನ್ನು ಪ್ರೋತ್ಸಾಹಿಸಬಾರದು.

ü      ಕ್ಷೇತ್ರ ಸಿಬ್ಬಂದಿಯೊಂದಿಗೆ ಸಹಕರಿಸುವುದು

 

Ø      ಸೇವೆ ಸಲ್ಲಿಸಲು ಅಗತ್ಯ ಮಾಹಿತಿಗಳನ್ನು ಒದಗಿಸುವುದು.

Ø      ತಿಳುವಳಿಕೆ ಪತ್ರದಲ್ಲಿ ತಿಳಿಸಿರುವ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಸ್ಥಳದಲ್ಲಿ ಹಾಜರಿರತಕ್ಕದ್ದು.

 

ü      ಭೂಆಸ್ತಿಗಳನ್ನು ಖರೀದಿಸುವ ಸಂದರ್ಭದಲ್ಲಿ ಮಾರಾಟಗಾರರು ಹೇಳಿರುವ ಅಳತೆಗಳನ್ನು ಹೊಂದಿರುವ ಬಗ್ಗೆ ಧೃಢೀಕರಿಸಿಕೊಳ್ಳತಕ್ಕದ್ದು.  ಯಾವುದೇ ರೀತಿ ಒಪ್ಪಂದ / ವ್ಯವಹಾರಗಳಿಗೆ ಮುನ್ನ ಹಾಗೂ ನೋಂದಣಿಗೆ ಮುನ್ನ ಪರವಾನಗಿ ಭೂಮಾಪಕರಿಂದ ಜಮೀನನ್ನು ಅಳತೆ ಮಾಡಿಸುವುದು.  ಇದರಿಂದ ಮುಂದೆ ಉದ್ಭವಿಸಬಹುದಾದ ಭೂವಿವಾದಗಳನ್ನು ತಡೆಗಟ್ಟಬಹುದಾಗಿದೆ.

ü      ಅನುಬಂಧದಲ್ಲಿ ಹೇಳಲಾಗಿರುವ ಶುಲ್ಕಕ್ಕಿಂತ ಅಧಿಕ ಶುಲ್ಕವನ್ನು ಪಾವತಿಸಬಾರದು.  ಯಾವುದೇ ರೀತಿಯ ಅವ್ಯವಹಾರಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರತಕ್ಕದ್ದು.