ನಗರಮಾಪನ
ಕರ್ನಾಟಕ ಭೂಕಂದಾಯ ಅಧಿನಿಯಮ 1964 ಮತ್ತು ನಿಯಮಾವಳಿ 1966ರ ಅಡಿಯಲ್ಲಿ ಹಕ್ಕುದಾಖಲೆಗಳನ್ನು ವ್ಯವಸಾಯ ಮತ್ತು ವ್ಯವಸಾಯೇತರ ಜಮೀನುಗಳಿಗೆ ನಿರ್ವಹಣೆ ಮಾಡುವ ಬಗ್ಗೆ ಪ್ರತ್ಯೇಕ ಅಧ್ಯಾಯಗಳಲ್ಲಿ ನೀಡಲಾಗಿದೆ.

ಭೂಕಂದಾಯ ಅಧಿನಿಯಮ 1964 ರ ಅಧ್ಯಾಯ 13 ರ ವಿಧಿ 148 ರಿಂದ 156ರಲ್ಲಿ ಮತ್ತು ನಿಯಮಗಳು 82 ರಿಂದ 93ಎ ರಲ್ಲಿ ನಗರಮಾಪನವನ್ನು ಜಾರಿಗೊಳಿಸುವ ಮತ್ತು ನಿರ್ವಹಿಸುವ ವಿಧಿ – ವಿಧಾನಗಳನ್ನು ವಿವರಿಸಲಾಗಿದೆ.

ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ- 148 ರಿಂದ 156 ವರೆಗೆ ನಗರ / ಪಟ್ಟಣಗಳ ಮಿತಿಯನ್ನು ನಿಗದಿಗೊಳಿಸುವ ಮತ್ತು ನಗರಮಾಪನವನ್ನು ಪ್ರಾರಂಭಿಸುವ, ಕೈಗೊಳ್ಳುವ ಮತ್ತು ಇತರೆ ವಿಷಯಗಳ ಬಗ್ಗೆ ವಿವರಿಸಲಾಗಿದೆ.

ಕರ್ನಾಟಕ ಭೂಕಂದಾಯ ನಿಯಮಾವಳಿ 1966ರ 12ನೇ ಅಧ್ಯಾಯದ ನಿಯಮ 82 – 93ಎ ವರೆಗೆ ಆಸ್ತಿಗಳನ್ನು ಅಳತೆ ಮಾಡುವ, ಹಕ್ಕುದಾಖಲೆಗಳ ಬಗ್ಗೆ ವಿಚಾರಣೆ ನಡೆಸುವ, ನೋಟೀಸು ಜಾರಿ ಮಾಡುವ ಬಗ್ಗೆ, ಮುಂತಾದ ವಿಚಾರಗಳ ಬಗ್ಗೆ ನಿಯಮಗಳನ್ನು ವಿವರಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 48 ನಗರ / ಪಟ್ಟಣ ಪ್ರದೇಶಗಳಲ್ಲಿ ನಗರಮಾಪನ ಅಳವಡಿಕೆ ಮತ್ತು ನಿರ್ವಹಣೆ ಜಾರಿಯಲ್ಲಿದ್ದು, ಇವುಗಳ ಪೈಕಿ 42 ನಗರ / ಪಟ್ಟಣಗಳು ಬೆಳಗಾಂ ವಿಭಾಗಕ್ಕೆ, 1 ನಗರ ಮೈಸೂರು ವಿಭಾಗಕ್ಕೆ, 2 ನಗರಗಳು ಗುಲ್ಬರ್ಗಾ ವಿಭಾಗಕ್ಕೆ ಹಾಗೂ 3 ನಗರಗಳು ಬೆಂಗಳೂರು ವಿಭಾಗಕ್ಕೆ ಸೇರಿದೆ.

ನಗರಮಾಪನ ಕೈಗೊಂಡು ನಗರಮಾಪನ ಕಾಲೋಚಿತ ಕೆಲಸ ಜಾರಿಯಲ್ಲಿರುವ ನಗರಗಳ ಪಟ್ಟಿ

1

ಬೆಂಗಳೂರು (1979)

17

ಮಹಲಿಂಗಪುರ (1962)

33

ರಾಣೆಬೆನ್ನೂರು (1918)

2

ದಾವಣಗೆರೆ (1975)

18

ಮುದ್ದೇಬಿಹಾಳ (1971)

34

ಶಿರಸಿ (1937)

3

ಕೆಜಿಎಫ್

(ರಾಬರ್ಟಸನ್ ಪೇಟೆ) (1989)

19

ಮುಧೋಳ (1968)

35

ಹಾವೇರಿ (1932)

4

ಬೆಳಗಾಂ (1922-23)

20

ನರಗುಂದ (1924)

36

ಬಾದಾಮಿ (1968)

5

ಧಾರವಾಡ (1922)

21

ರಾಮದುರ್ಗ (1927)

37

ಬಸವನ ಬಾಗೇವಾಡಿ (1975)

6

ಹುಬ್ಬಳ್ಳಿ (1922)

22

ಸಂಕೇಶ್ವರ ( 1965)

38

ಹಳಿಯಾಳ (1969)

7

ಅಣ್ಣೀಗೇರಿ (1932)

23

ಸವದತ್ತಿ (1964)

39

ಹೊನ್ನಾವರ (1979)

8

ಅಥಣಿ (1921)

24

ತಾಳಿಕೋಟೆ (1943)

40

ಹುಕ್ಕೇರಿ (1970)

9

ಬೈಲಹೊಂಗಲ (1959)

25

ಮೊರಬ (1930)

41

ಹುನಗುಂದ (1972)

10

ಬ್ಯಾಡಗಿ (1918)

26

ಉಪ್ಪಿನ ಬೆಟಗೇರಿ (1939)

42

ಕುಂದಗೋಳ (1976)

11

ಚಿಕ್ಕೋಡಿ (1970)

27

ಬಿಜಾಪುರ (1921)

43

ನವಲಗುಂದ (1921)

12

ಗುಳೇದಗುಡ್ಡ (1921)

28

ಗದಗ್ ಬೆಟಗೇರಿ (1944)

44

ರೋಣ (1970)

13

ಇಳಕಲ್ (1938)

29

ಗೋಕಾಕ್ (1941)

45

ಬಾಗಲಕೋಟೆ (1916)

14

ಇಂಡಿ (1924)

30

ಕಾರವಾರ (1971)

46

ಮೈಸೂರು (1979)

15

ಜಮಖಂಡಿ (1933)

31

ನಿಪ್ಪಾಣಿ (1922)

47

ಗುಲ್ಬರ್ಗಾ (1970)

16

ಲಕ್ಷ್ಮೇಶ್ವರ (1962)

32

ರಬಕವಿ ಬನಹಟ್ಟಿ (1980)

48

ಬಳ್ಳಾರಿ (1937)