‘ಪೈಕಿ ಪಹಣಿ ’ ಎಂದರೇನು ?
Title : ‘ಪೈಕಿ ಪಹಣಿ ’ ಎಂದರೇನು ?
No : 1
Issued By : PMU
Detailed Description : ‘ಪೈಕಿ ಪಹಣಿ ’ ಎಂದರೆ - ಗಣಕೀಕರಣ ಪೂರ್ವದಲ್ಲಿ ಪಹಣಿಗಳನ್ನು ಗ್ರಾಮಲೆಕ್ಕಿಗರು ನಿರ್ವಹಿಸುತ್ತಿದ್ದರು. ಗ್ರಾಮ ಲೆಕ್ಕಿಗರು ನಿರ್ವಹಿಸುತ್ತಿದ್ದ ಕಾಲದಲ್ಲಿ ಪ್ರತಿಯೊಬ್ಬ ಹಕ್ಕುದಾರರಿಗೆ ಪ್ರತ್ಯೇಕ ಪಹಣಿಗಳನ್ನು ಆಕಾರಬಂದ್ ದುರಸ್ತಿಯಾಗದೇ ಬರೆದಿರುತ್ತಾರೆ. ಇದೇ ರೀತಿಯಾಗಿ ಭೂ ಮಂಜೂರಾತಿ, ಭೂ ನ್ಯಾಯಮಂಡಳಿ ತೀರ್ಪಿನ ಆದೇಶಗಳಂತೆ ಸಹ ಪ್ರತಿ ಮಂಜೂರಾತಿ / ಆದೇಶಕ್ಕೂ ಸಹ ಪ್ರತ್ಯೇಕ ಪಹಣಿಗಳನ್ನು ಬರೆದಿರುತ್ತಾರೆ. ಇಂತಹ ಪಹಣಿಗಳಲ್ಲಿ ಸರ್ವೆ ನಂಬರುಗಳನ್ನು ಗ್ರಾಮ ಲೆಕ್ಕಿಗರೇ ನೀಡಿರುತ್ತಾರೆ. ಈ ಸರ್ವೆ ನಂಬರುಗಳಿಗೆ ಕ್ರಮಬದ್ಧವಾಗಿ ಆಕಾರಬಂದ್ ನಲ್ಲಿ ಸರ್ವೆ ನಂಬರುಗಳು / ಹಿಸ್ಸಾ ನಂಬರುಗಳಾಗಿ ದಾಖಲಾಗಿರುವುದಿಲ್ಲ. ಅಂದರೆ ಈ ಹಕ್ಕುದಾರರಿಗೆ ಪ್ರತ್ಯೇಕ ಗಡಿಗಳನ್ನು ಗುರುತಿಸಿರುವುದಿಲ್ಲ ಎಂಬುದಾಗಿ ಅರ್ಥ. ಇಂತಹ ಪಹಣಿಗಳನ್ನು ಆಧರಿಸಿಕೊಂಡು ಕ್ರಯ, ವಿಕ್ರಯ, ವಿಭಾಗಗಳ ಮುಖಾಂತರ ನಂತರದ ಹಂತದಲ್ಲಿಯೂ ಹಕ್ಕು ಬದಲಾವಣೆಗಳನ್ನು ಮಾಡಿದಾಗ ಹಕ್ಕುದಾರರಿಗೆ ಪ್ರತ್ಯೇಕ ಪಹಣಿಗಳನ್ನು ಬರೆದಿರುತ್ತಾರೆ. ಇವುಗಳೇ ಪೈಕಿ ಪಹಣಿಯಾಗಿರುತ್ತವೆ.
Attachments : No Attachments