FAQ

ನಗರಮಾಪನ ಅಥವಾ ಸಿಟಿ ಸರ್ವೆಎಂದರೇನು?

ನಗರ ಅಥವಾ ಪಟ್ಟಣ ಪ್ರದೇಶದಲ್ಲಿನ ವ್ಯಕ್ತಿಗತ ಮತ್ತು ಸರ್ಕಾರಿ ಆಸ್ತಿಗಳು ಅಂದರೆ ಕಟ್ಟಡ, ನಿವೇಶನ, ರಸ್ತೆ, ಉದ್ಯಾನವನ, ಆಟದ ಮೈದಾನ ಇತ್ಯಾದಿಗಳನ್ನು ಕಾನೂನುಬದ್ದವಾಗಿ ಹಾಗೂ ನಿಖರವಾಗಿ ಇಲಾಖೆಯ ಜಾರಿಯಲ್ಲಿರುವ ನಿಯಮಗಳ ಅಡಿಯಲ್ಲಿ ಅಳತೆಮಾಡಿ ನಕ್ಷೆ ಹಾಗೂ ಇತರೆ ಅಧಿಕೃತವಾದ ದಾಖಲೆಗಳನ್ನು ತಯಾರುಮಾಡಿ, ಪ್ರತಿ ಆಸ್ತಿಗೂ ನಿರ್ದಿಷ್ಟವಾದ ಹಾಗೂ ಶಾಶ್ವತವಾದ ಸಂಖ್ಯೆಯನ್ನು ನೀಡಿ ಅಧಿಕೃತ ದಾಖಲೆಗಳ ಆಧಾರದ ಮೇಲೆ ಪ್ರತಿ ಆಸ್ತಿಯ ಹಕ್ಕು, ಅನುಭೋಗದ ಹಕ್ಕು, ಋಣಭಾರ ಇತ್ಯಾದಿ ಅಂಶಗಳನ್ನು ದಾಖಲ್ಮಾಡಿ ಕಾಲಾನುಕ್ರಮದಲ್ಲಿ ಈ ಆಸ್ತಿಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ಗುರ್ತಿಸಿ, ಅದರಂತೆ ದಾಖಲೆಗಳಲ್ಲಿ ದಾಖಲಿಸಿ, ಹಕ್ಕು ದಾಖಲೆಗಳನ್ನು ನಿರ್ವಹಿಸುವ ಕಾರ್ಯಕ್ಕೆ ನಗರಮಾಪನ ಅಥವಾ ಸಿಟಿ ಸರ್ವೆಎಂದು ಕರೆಯುವರು.ನವನಾಗರೀಕತೆಯ ಹೆಗ್ಗುರುತು ನಗರಮಾಪನ

ನಗರಮಾಪನದ ನಕ್ಷೆ ನಗರದ ಕೈಗನ್ನಡಿ
1.

ನಗರಮಾಪನ ಅಥವಾ ಸಿಟಿ ಸರ್ವೆಎಂದರೇನು?

ಉತ್ತರ

ನಗರ ಅಥವಾ ಪಟ್ಟಣ ಪ್ರದೇಶದಲ್ಲಿನ ವ್ಯಕ್ತಿಗತ ಮತ್ತು ಸರ್ಕಾರಿ ಆಸ್ತಿಗಳು ಅಂದರೆ ಕಟ್ಟಡ, ನಿವೇಶನ, ರಸ್ತೆ, ಉದ್ಯಾನವನ, ಆಟದ ಮೈದಾನ ಇತ್ಯಾದಿಗಳನ್ನು ಕಾನೂನುಬದ್ದವಾಗಿ ಹಾಗೂ ನಿಖರವಾಗಿ ಇಲಾಖೆಯ ಜಾರಿಯಲ್ಲಿರುವ ನಿಯಮಗಳ ಅಡಿಯಲ್ಲಿ ಅಳತೆಮಾಡಿ ನಕ್ಷೆ ಹಾಗೂ ಇತರೆ ಅಧಿಕೃತವಾದ ದಾಖಲೆಗಳನ್ನು ತಯಾರುಮಾಡಿ, ಪ್ರತಿ ಆಸ್ತಿಗೂ ನಿರ್ದಿಷ್ಟವಾದ ಹಾಗೂ ಶಾಶ್ವತವಾದ ಸಂಖ್ಯೆಯನ್ನು ನೀಡಿ ಅಧಿಕೃತ ದಾಖಲೆಗಳ ಆಧಾರದ ಮೇಲೆ ಪ್ರತಿ ಆಸ್ತಿಯ ಹಕ್ಕು, ಅನುಭೋಗದ ಹಕ್ಕು, ಋಣಭಾರ ಇತ್ಯಾದಿ ಅಂಶಗಳನ್ನು ದಾಖಲ್ಮಾಡಿ ಕಾಲಾನುಕ್ರಮದಲ್ಲಿ ಈ ಆಸ್ತಿಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ಗುರ್ತಿಸಿ, ಅದರಂತೆ ದಾಖಲೆಗಳಲ್ಲಿ ದಾಖಲಿಸಿ, ಹಕ್ಕು ದಾಖಲೆಗಳನ್ನು ನಿರ್ವಹಿಸುವ ಕಾರ್ಯಕ್ಕೆ ನಗರಮಾಪನ ಅಥವಾ ಸಿಟಿ ಸರ್ವೆಎಂದು ಕರೆಯುವರು.

2.

ನಗರಮಾಪನ ಸಂಖ್ಯೆ ಅಥವಾ ಸಿಟಿ ಸರ್ವೆಎಂದರೇನು?

ಉತ್ತರ

ನಗರ ಅಥವಾ ಪಟ್ಟಣ ಪ್ರದೇಶದಲ್ಲಿನ ಪ್ರತಿಯೊಂದು ಆಸ್ತಿಗೂ ನೀಡುವ ಒಂದು ನಿರ್ದಿಷ್ಟವಾದ ಶಾಶ್ವತವಾದ ಹಾಗೂ ಅಧಿಕೃತ ವಾದ ಸಂಖ್ಯೆಯಾಗಿರುತ್ತದೆ.

ಸೂಚನೆ ನಗರಮಾಪನ ಪದ್ದತಿ ಜಾರಿಯಲ್ಲಿರುವ ನಗರ/ಪಟ್ಟಣಗಳಲ್ಲಿ ನೋಂದಣಿ ಪೂರ್ವದಲ್ಲಿ ತಯಾರಿಸುವ ದಸ್ತಾವೇಜಿನಲ್ಲಿ (ಕ್ರಯಪತ್ರ, ವಿಭಾಗಪತ್ರ, ಭೋಗ್ಯಪತ್ರ) ನಗರಮಾಪನ ಸಂಖ್ಯೆಯನ್ನು ದಾಖಲಿಸಿ ನೋಂದಣಿ ಮಾಡಿದಲ್ಲಿ ಉದ್ಬವಿಸಬಹುದಾದ ತಕರಾರನ್ನು ನಿವಾರಿಸಲು ಸಹಾಯವಾಗುವುದು.

3.

ನಗರಮಾಪನದ ಮುಖ್ಯ ಉದ್ದೇಶಗಳೇನು?

ಉತ್ತರ

ನಗರಮಾಪನ ಕಾರ್ಯವು ಆಡಳಿತ, ಕಾನೂನು ಮತ್ತು ಆರ್ಥಿಕ ದೃಷ್ಟಿಗಳನ್ನು ಒಳಗೊಂಡ ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿರುವುದಲ್ಲದೇ ನಗರ ಸೌಂದರ್ಯ ಮತ್ತು ವ್ಯಕ್ತಿಗತ ಆಸ್ತಿಗಳ ರಕ್ಷಣೆ ಹಾಗೂ ಸರ್ಕಾರದ ಆಸ್ತಿಗಳ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶಗಳನ್ನು ಸಹ ಹೊಂದಿರುತ್ತದೆ.

4.

ನಗರಮಾಪನ ದಾಖಲೆಗಳಿಗೆ ಕಾನೂನು ಮಾನ್ಯತೆ ಇದೆಯೇ?

ಉತ್ತರ

ಹೌದು. ನಗರಮಾಪನ ದಾಖಲೆಗಳನ್ನು ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಅಧ್ಯಾಯ 13ರಲ್ಲಿನ ಕಲಂ 148 ರಿಂದ 156, ಹಾಗೂ ನಿಯಮಾವಳಿ 1966 ರ ಅಧ್ಯಾಯ 12 ರಲಲ್ಇನ ನಿಯಮ 82 ರಿಂದ 93 ರ ಅಡಿಯಲ್ಲಿ ರಚಿತವಾಗಿರುವ ಕಾನೂನು ಅಡಿಯಲ್ಲಿ ಶಾಸನಬದ್ದ ಅಧಿಕಾರದ ಅನ್ವಯ ತಯಾರಿಸಿ ನಿರ್ವಹಿಸಲಾಗಿರುತ್ತದೆ. ಆಸ್ತಿಗಳ ಬಗ್ಗೆ ವಿವಾದ ಉಂಟಾದಲ್ಲಿ ನ್ಯಾಯಾಲಯಗಳಿಗೆ ಈ ದಾಖಲೆಗಳನ್ನು ಹಾಜರುಪಡಿಸಿ ಸೂಕ್ತ ರಕ್ಷಣೆ ಪಡೆಯಲು ಅವಕಾಶವಿರುತ್ತದೆ.